♫musicjinni

Ayogya Movie Yenammi Yenammi Song 100 Million Celebration | Vijay Karnataka

video thumbnail
ಭರ್ಜರಿ ಚೇತನ್‌ ಬರೆದಿರುವ 'ಅಯೋಗ್ಯ' ಸಿನಿಮಾದ ಏನಮ್ಮಿ ಏನಮ್ಮಿ...ಹಾಡು ಯುಟ್ಯೂಬ್‌ನಲ್ಲಿ 100 ಮಿಲಿಯನ್ ವೀಕ್ಷಣೆ ಕಂಡಿದೆ. ಅರ್ಜುನ್ ಜನ್ಯ ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದು, ವಿಜಯ್ ಪ್ರಕಾಶ್ ಈ ಹಾಡು ಹಾಡಿದ್ದಾರೆ. 2019ರಲ್ಲಿ ತೆರೆ ಕಂಡ ಈ ಸಿನಿಮಾದ ಈ ಹಾಡನ್ನು ಇಂದಿಗೂ ಜನರು ಇನ್‌ಸ್ಟಾ ರೀಲ್ಸ್ ಮಾಡುತ್ತಾರೆ. ಚಿತ್ರತಂಡ ಈ ಖುಷಿಯನ್ನು ಕೇಕ್ ಕಟ್ ಮಾಡುವ ಮೂಲಕ ಸಂಭ್ರಮಿಸಿದೆ. 'ಅಯೋಗ್ಯ' ಸಿನಿಮಾದಲ್ಲಿ ರಚಿತಾ ರಾಮ್, ಸತೀಶ್ ನೀನಾಸಂ ಮುಂತಾದವರು ನಟಿಸಿದ್ದರು. ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಕಾರ್ಯಕ್ರಮದಲ್ಲಿ ನಟ ಶ್ರೀಮುರಳಿ, ರಚಿತಾ ರಾಮ್, ಸಂಭಾಷಣೆಕಾರ ಮಾಸ್ತಿ, ನಿರ್ದೇಶಕ ಮಯೂರ್ ರಾಘವೇಂದ್ರ, 'ಭರ್ಜರಿ' ಚೇತನ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕ ವಿಜಯ್ ಪ್ರಕಾಶ್ ಮುಂತಾದವರು ಭಾಗಿಯಾಗಿದ್ದರು. ಮಹೇಶ್ ಕುಮಾರ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಟಿ ಆರ್ ಚಂದ್ರಶೇಖರ್ ಈ ಚಿತ್ರ ನಿರ್ಮಿಸಿದ್ದರು.

#AyogyaKannadaMovie #YenammiYenammi100MillionCelebration #RachitaRam


Our Website : https://Vijaykarnataka.com
Facebook: https://www.facebook.com/VijayKarnataka/
Twitter: https://twitter.com/vijaykarnataka

Ayogya Movie Yenammi Yenammi Song 100 Million Celebration | Vijay Karnataka

Disclaimer DMCA