Anuraga Yenaythu - Nee Nanna Gellalare - HD Video Song | Dr.Rajkumar | Manjula | Ilayaraja |
|
Nee Nanna Gellalare Kannada Movie Song: Anuraga Yenaythu - HD Video
Actor: Dr Rajkumar, Manjula Music: Ilayaraja Singer: Dr Rajkumar Lyrics: Chi Udayashankar Year :1981 Subscribe To SGV Sandalwood Songs Channel For More Kannada Video Songs. ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!! Nee Nanna Gellalare – ನೀ ನನ್ನ ಗೆಲ್ಲಲಾರೆ *1981SGV Anuraga Yenaythu Song Lyrics In Kannada ಐ ಲವ್ ಯು... ಐ ಲವ್ ಯು .. ಐ ಲವ್ ಯು ಅನುರಾಗ, ಏನಾಯಿತು, ಮನಸೇಕೆ ಕಲ್ಲಾಯಿತು ನಿನ್ನ ಸವಿ ಮಾತು ಕಹಿ ಏಕಾಯಿತು ನಿನ್ನೊಲವೆಲ್ಲ ಇಂದೇನಾಯಿತು ಅನುರಾಗ, ಏನಾಯಿತು, ಮನಸೇಕೆ ಕಲ್ಲಾಯಿತು ನೀಲಿ ಬಾನನು ಬಿಡುವಾಗ, ಮುಗಿಲೆಲ್ಲಾ ಕರಗಿ ಅಳುವಂತೆ ನೀಲಿ ಬಾನನು ಬಿಡುವಾಗ, ಮುಗಿಲೆಲ್ಲಾ ಕರಗಿ ಅಳುವಂತೆ ನಿನ್ನ ಪ್ರೇಮದಿಂದಾ ನಾ ದೂರಾಗಿ, ನನ್ನ ಕಂಗಳೆಲ್ಲಾ ಕಣ್ಣೀರಾಯಿತು ಹಗಲಿರುಳೆಲ್ಲಾ ನಿನ್ನ ನೆನಪಾಯಿತು, ಸರಸ ಹರುಷ ಬರಿ ಕನಸಾಯಿತು ಅನುರಾಗ, ಏನಾಯಿತು ಓಡಿ ಬರುವ ನದಿಯಲ್ಲಿ ಕಡಲಾಸೆ ತುಂಬಿ ಹರಿವಂತೆ ಓಡಿ ಬರುವ ನದಿಯಲ್ಲಿ ಕಡಲಾಸೆ ತುಂಬಿ ಹರಿವಂತೆ ನಿನ್ನ ಸೇರೊ ಆಸೆ ನಾ ಕಂಡಾಗ, ಜೊತೆ ಬಾಳಲೆಂದು ಬಳಿ ಬಂದಾಗ ಸಿಡಿಲೊಂದೆರಗಿ ಬಡಿದಂತಾಗಿ ವಿರಸ ವಿರಹ ಗತಿ ನನಗಾಯಿತು ಅನುರಾಗ, ಏನಾಯಿತು, ಮನಸೇಕೆ ಕಲ್ಲಾಯಿತು ನಿನ್ನ ಸವಿ ಮಾತು ಕಹಿ ಏಕಾಯಿತು ನಿನ್ನೊಲವೆಲ್ಲ ಇಂದೇನಾಯಿತು ಅನುರಾಗ, ಏನಾಯಿತು, ಮನಸೇಕೆ ಕಲ್ಲಾಯಿತು |