♫musicjinni

Ravisri Smiley | Nuvvo Raayi Neno Shilpi Latest Full Song 2019 By | Ravisri

video thumbnail
Direction & Editing : lakshman & Nani
Cinematographer : Lakshman
lyirics-Singer-Music : Charan Arjun
CAST : ravisri
Ast-Cinematographer:Ujwal
Music Production Manager: Malya Kandukuri
Recorded,Mixed & Mastered At G Miracles crew By Mahie
Ravisri Smiley Team:
Ravisri Smiley Team:: Lakshman, Jagadeesh
Ravisri Smiley Team:
in Association With G M C Telivision
నువ్వో రాయి.. 🕳
నేనొ శిల్పి... 🔨
చెక్కుతున్నంతసేపు...
నిన్ను నేను చెక్కుతున్నంతసేపు........
ఆ తరువాత అంటారంతా నిన్ను దేవుడని....... 🙏
నేనో అంటారానివాడిని..... 😓
కానీ నిన్నుతాకే భాగ్యం లేదా...? 👈
నేనెం పాపం జెస్తినీ......

Nuvvo Raayi Neno Shilpi,nuvvo rayi nino silpi full song,nuvvo raayi neno shilpi mp3 song,nuvo rayi neno shilpi full song,bvm siva shankar,Charan Arjun,bvm creations songs,bvm songs,nuvvo raayi neno shilpi tiktok song,Nuvvo Raayi Neno Shilpi spoofs,bvm mission,bvm media,telugu songs,ugadhi song,bvm music festival,2019 latest songs,heart touching song,bvm Nuvvo Raayi Neno Shilpi,bvm,2019 new song,telugu movies,vinee cinematographer,suresh surya,vinee


Telugu song lyric Translated by :Raghunath
ನು ಶಿಲೆ ನಾನು ಶಿಲ್ಪಿ
ಕಲ್ಲು ಕಡೆಯುವವರೆಗು ,
ನಂತರ ಹೇಳುತ್ತಾರೆ ನೀನು
ದೇವರೆಂದು ನಾನು ಅಸ್ಪೃಶ್ಯನೆಂದು
(ಮುಟ್ಟಬಾರದ ಮನುಷ್ಯ) !

ನಿನ್ನ ಗರ್ಭಗುಡಿ ಕಟ್ಟುವಾಗ
ನಾನು ದೊಡ್ಡ ಮೇಸ್ತ್ರಿ ,
ಅದು (ಗರ್ಭಗುಡಿ) ಪೂರ್ತಿ ಆದ ಮೇಲೆ
ನನ್ನ ಒಳಗೆ ಬಾರದಂತೆ ತಳ್ಳಿದಿ !

ನಿನ್ನ (ದೇವರ) ಎಚ್ಚರ ಮಾಡಲು
ನಾನೆ ಡೋಲು (ಖಂಜಿರ) ಬಾರಿಸಿದೆ ,
ಆದರಿಂದು ನಿನ್ನ ಮುಟ್ಟಬಾರದಾದರೆ ನನ್ನ ಪಾಪವೇನು ?

ನೀನು ನಡೆವಾಗ ನಿನ್ನ ಪಾದಕೆ ಮುಳ್ಳು ಚುಚ್ಚಬಾರದೆಂದು ನಾನೆ ಪಾದುಕೆ ಮಾಡಿಕೊಟ್ಟೆ ! ನನ್ನ ಪಾದವೆ ಗುಡಿಯೊಳಗೆ ಇಡಬಾರದೆಂದರೆ ನನ್ನ ತಪ್ಪಾದರು ಏನು ?

ನಿನ್ನ ಸಿಂಗರಿಸಲು ಬಂಗಾರದ ಬಣ್ಣ ಬಣ್ಣದ ವಸ್ತ್ರವ ಕೈಯ್ಯಾರೆ ನೈದು ಕೊಟ್ಟವನು ನಾನು ನಿನ್ನ ನೋಡ ಬರಲು ನನ್ನಲ್ಲಿ ಒಳ್ಳೆ ವಸ್ತ್ರವಿಲ್ಲ ಏನಯ್ಯ ನಮ್ಮ ಹಣೆ ಬರಹ ?

ನಿನ್ನ ಮಾಸಿದ ಬಟ್ಟೆಯೆ ಮಹಾ ಪ್ರಸಾದವೆಂದು ಶುಭ್ರ ಮಾಡಿಕೊಟ್ಟವ ನಾನು ನನ್ನನ್ನೆ ಮೈಲಿಗೆಯವನೆಂದು ದೂರ ಇರಬೇಕೆಂದು ಹೇಳಿದೆ ನೀನು !

ನಾನು ಬೆವರಿಳಿಸಿ ಮಾಡಿದ ಮಣ್ಣ ಹಣತೆ ನಿನ್ನ ಮುಂದೆ ಬೆಳಗುತಿದೆ ! ಆದರೇತಕೆ ನಮ್ಮ ಮಣ್ಣ ಬದುಕಲ್ಲಿ ಬೆಳಕಿಲ್ಲದಂತೇಕೆ ಮಾಡಿದ್ದಿ ?

ಬಾಯಿಲ್ಲದ ಮೂಕ ಪ್ರಾಣಿಗಳ ಕಾಯುವಂತೆ ಗೋಸಿ (ಗಂಡಸರ [ಸೊಂಟದ] ಒಳ ಉಡುಪು ) ಕೌದಿ (ಮಳೆ ಮತ್ತು ಚಳಿಗೆ ಹೊದಿಕೆ) ಕೊಟ್ಟೆ ! ಈಗ ಅವಕ್ಕು (ಮೂಕ ಪ್ರಾಣಿಗಳು) ನಮಗೂ ವ್ಯತ್ಯಾಸವಿಲ್ಲವೆಂಬಂತೆ ಸುಲಭವಾಗಿ ನಮ್ಮನ್ನು ಹಿಂದಕ್ಕಿಟ್ಟೆ !

ತಾಯಿ ಹಾಲೆಂಬಂತೆ ತಾಟಿ ಕಳ್ಳು
ಇಳಿಸಲು ಮರ ಏರುವಾಗ ನನ್ನ ಗೋಸಿ ಕಾಣುವಂತೆ ಮಾಡಿದೆ .

ನೂರಡಿಯ ಮರ ಏರಿದ ಕಾಲುಗಳಿಗೆ ನಿನ್ನ ಹೊರುವ ಭಾಗ್ಯವೆ ನೀಡಿದೆ .

ನಿನಗಾಗಿ ಪಲ್ಲಕ್ಕಿ ಮಾಡಿದ ಕೈಗಳಿಗೆ ಒಂದು ತುಂಡು ಕಡ್ಡಿ (ದೇವರಿಗೆ ಬೆಳಗಲು ಊದಿನ ಕಡ್ಡಿ) ನೀಡದೆ ಹೋದೆ .

ಊರ ಜನರಿಗೆಲ್ಲಾ ಕ್ಷೌರ ಮಾಡಿದ ನನ್ನ ಬದುಕೆ ಕ್ಷೌರ ಮಾಡಿದೆ .

ನಮ್ಮ ಪಿತೃಗಳು ಮಾಡುತ್ತಿದ್ದ ಕಾಯಕ ಕಂಡು ನಮಗೇನೇನೊ ಹೆಸರಿಟ್ಟೆ ನೀನು !

ಆದರೆ ಉಳ್ಳವನು ಇಲ್ಲದವನೆಂದು ತಾರತಮ್ಯ ಮಾಡಿ ನೀನು ಸಹ ಸಾಮಾನ್ಯ ಮಾನವನಾಗಿಬಿಟ್ಟೆ .

ಎಷ್ಟು ಅರ್ಥಪೂರ್ಣ ಹಾಡು ಅನ್ನಿಸುತ್ತೆ ಅಲ್ಲವೆ ?
ಆದರೆ ಯೋಚಿಸಿ ನೋಡಿ
ಸಾಹಿತ್ಯಕ್ಕೆ ತಕ್ಕಂತೆ ನಟನೆ
ನಟನೆಗೆ ತಕ್ಕಂತೆ ಹಾಡಿರುವ ಗಾಯಕ
ಗಾಯನಕ್ಕೆ ತಕ್ಕಂತೆ ಸಂಗೀತ
ಸಂಗೀತಕ್ಕೆ ತಕ್ಕಂತೆ ಗುನುಗುವ ಹಿನ್ನಲೆ
ಹಿನ್ನಲೆಗೆ ತಕ್ಕಂತೆ ಚಿತ್ರಿಕರಣ
ಒಟ್ಟಿನಲ್ಲಿ ಎಲ್ಲರೂ ಇಷ್ಟಪಡುವಂತಾಗಿದೆ .

ಆದರೆ ಇದರಲ್ಲಿ ದೂರಿರುವುದು "ದೇವರನ್ನು" ದೇವರನ್ನು ದೂರುವುದು ಸಮಂಜಸವೆ ?
ದೇವರು ಯಾರನ್ನು ಅಸ್ಪೃಶ್ಯರೆಂದು ಹೇಳಿಲ್ಲ , ಅಸ್ಪೃಶ್ಯರೆಂದು ಹೇಳಿದವರ್ಯಾರು ?
ಹೇಳಿದವರ ಗುಂಪು/ಪಂಗಡ ಹೆಸರು ಹೇಳಬೇಕಿಲ್ಲ ನೀವೆ ತಿಳಿದಿದ್ದೀರಿ .

ದೇವಸ್ಥಾನದೊಳಗೆ ಬರಬೇಡವೆಂದು ದೇವರು ಹೇಳಿಲ್ಲ ! ಬರಬೇಡವೆಂದು ಹೇಳಿದವರ್ಯಾರು ?

ನನ್ನನ್ನು ಮುಟ್ಟಬೇಡವೆಂದು ದೇವರು ಹೇಳಿಲ್ಲ ! ಮಲಗಿದ ಮಗುವನ್ನು ಎಬ್ಬಿಸುವ "ತಾಯಿ" ತಾಯಿಗೆ ಮಗುವನ್ನು ಮುಟ್ಟಬಾರದೆಂದು ಹೇಳಿದರೆ ಅದು ತಪ್ಪಲ್ಲವೆ ?

ಪಾದದ ರಕ್ಷಣೆಗಾಗಿ ಪಾದುಕೆ ಮಾಡಿಕೊಟ್ಟವರು ದೇವಸ್ಥಾನದೊಳಗೆ ಬರಬಾರದೆಂದು ದೇವರು ಹೇಳಿಲ್ಲ ! ಪಾದುಕೆ ಮಾಡುವವರು ದೇವಸ್ಥಾನದೊಳಗೆ ಬರಬಾರದೆಂದು ಹೇಳಿದವರ್ಯಾರು ?

ಒಳ್ಳೆಯ ಬಟ್ಟೆ ಧರಿಸದವರು ದೇವಸ್ಥಾನದೊಳಗೆ ಬರಬಾರದೆಂದು ದೇವರು ಹೇಳಿಲ್ಲ ! ಒಳ್ಳೆಯ ಬಟ್ಟೆ ಧರಿಸಿದವರು ಮಾತ್ರ ದೇವಸ್ಥಾನದೊಳಗೆ ಬರಬೇಕೆಂದು ಹೇಳಿದವರ್ಯಾರು ?

ಮಾಸಿದ ಬಟ್ಟೆ ಒಗೆದು ಶುಭ್ರಮಾಡಿ ತಂದುಕೊಡುವವನನ್ನು ಮೈಲಿಗೆಯವನೆಂದು ಮನೆಯ ಹೊರಗೆ ನಿಲ್ಲಿಸಿದರೆ ಆತ ತಂದುಕೊಟ್ಟ ಬಟ್ಟೆ ಮೈಲಿಗೆಯಲ್ಲವೆ ? ಒಗೆದು ಶುಭ್ರಮಾಡಿ ತಂದುಕೊಡುವವನನ್ನು ದೇವಸ್ಥಾನದೊಳಗೆ ಬರಬಾರದೆಂದು ಹೇಳಿದವರ್ಯಾರು ?

ಬೆವರಿಳಿಸಿ ಮಾಡಿದ ಮಣ್ಣ ಹಣತೆ ನಿನ್ನ ಮುಂದೆ ಬೆಳಗುತಿದೆ ಸರಿ ! ಸಂಪಾದಿಸಿದ ಹಣವೆಲ್ಲ ಖರ್ಚು ಮಾಡಿ ಕಾಲಿ ಕೈಲಿದ್ದರೆ ದೇವರನ್ನು ದೂಷಿಸುವುದೇಕೊ ?

ಬಾಯಿಲ್ಲದ ಮೂಕ ಪ್ರಾಣಿಗಳ ಕಾಯುವಂತೆ ನಿನಗೊಂದು ವೃತ್ತಿ ನೀಡಿದ್ದಾನೆ ಆ ದೇವರು ! ಸಂಪಾದಿಸಿದ ಹಣದಲ್ಲೆ ಶುಭ್ರವಾಗಿರದ ನೀನು ದೇವರನ್ನೇಕೊ ದೂಷಿಸುವುದು ?

ತಾಯಿ ಹಾಲೆಂಬಂತೆ ತಾಟಿ ಕಳ್ಳು
ಇಳಿಸುವ ನಿನಗೊಂದು ಕಾಯಕ ಏರ್ಪಡಿಸಿದ್ದಾನೆ ಆ ದೇವರು ! ಸಂಪಾದಿಸಿದ ಹಣದಿಂದ ಸರಿಯಾದ ಬಟ್ಟೆ ಹಾಕಿಕೊಳ್ಳದೆ ನನ್ನ ಗೋಸಿ ಕಾಣುತಿದೆ ಎಂದು ದೇವರನ್ನೇಕೊ ದೂಷಿಸುವುದು ?

ನೂರಡಿಯ ಮರ ಏರಿದ ನಿನಗೆ ಪಲ್ಲಕ್ಕಿ ಹೋರುವ ಭಾಗ್ಯ ನೀಡಿದ್ದಾನೆ ಎಲ್ಲರಿಗೂ ಈ ಅವಕಾಶ ದೊರಕದು ನೀನೆ ಪುಣ್ಯವಂತ !

ಪಲ್ಲಕ್ಕಿ ಮಾಡಿದ ಕೈಗಳಿಗೆ ಒಂದು ಚೂರು ಕಡ್ಡಿ (ಊದುಬತ್ತಿ) ನೀಡಲಿಲ್ಲವೆಂದು ದೇವರನ್ನೇಕೆ ಜರಿಯುವುದು ಊದುಬತ್ತಿ ಕೊಂಡು ಹಚ್ಚಿ ಬೆಳಗಿದರೆ ನಿನ್ನನ್ಯಾರು ತಡೆಯುವುದಿಲ್ಲ !

ನಿನ್ನ ಬದುಕನ್ನೇಕೆ ದೇವರು ಕ್ಷೌರ ಮಾಡುತ್ತಾನೆ ? ನಿಗದಿತ ಸಮಯದವರೆಗೂ ವೃತ್ತಿಯಲ್ಲಿ ತೊಡಗಿಸಿಕೊಂಡು ನಂತರ ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಿ ದೇವಸ್ಥಾನಕ್ಕೆ ಹೋಗಿ ಧ್ಯಾನ ಮಾಡಿ ಧನ್ಯನಾಗಬಾರದೆ ?

ಪಿತೃಗಳು ಮಾಡುವ ಕಾಯಕ ಕಂಡು ಏನೇನೊ ಹೆಸರಿಟ್ಟವನು ದೇವರೇನು ? ಹೆಸರಿಟ್ಟದ್ದು ದುರುದ್ದೇಶದಿಂದಲ್ಲ ಗುರುತಿಸುವ ಸಲುವಾಗಿ ಹೆಸರಿಟ್ಟದ್ದು !

ಉಳ್ಳವನು ಇಲ್ಲದವನೆಂದು ತಾರತಮ್ಯ ಮಾಡಿದವರ್ಯಾರು ಮಾಡುತ್ತಿರುವವರ್ಯಾರು ? ಯೋಚಿಸಿ ದೇವರನ್ನೇಕೆ ಸಾಮಾನ್ಯ ಮಾನವನಾಗಿಬಿಟ್ಟೆ ಎಂದು ನಮ್ಮ ಮಟ್ಟಕ್ಕೆ ಇಳಿಸುವುದು ಸರಿಯೆ ?

ದೂರಬೇಕಿರುವುದು ಯಾರನ್ನು ಯೋಚಿಸಿ !

Click here to watch: Inspirational and Motivational Speeches
For latest Updates : https://www.youtube.com/c/BvmCreations
Like Us on Facebook-https://www.facebook.com/bvmcreation
Follow Us on Twitter - https://twitter.com/creationsbvm
Follow Us on Google+ -https://plus.google.com/+BvmCreations
Category
People & Blogs

Ravisri Smiley | Nuvvo Raayi Neno Shilpi Latest Full Song 2019 By | Ravisri

Disclaimer DMCA